
ದಾವಣಗೆರೆ: ನೂತನ ಕಾಂಗ್ರೆಸ್ ಸರ್ಕಾರದ ಬಜೆಟ್‌ನ್ನು (Karnataka) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜುಲೈ 7 ರಂದು ಮಂಡನೆ ಮಾಡಲಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಜೆಟ್ ಅಧಿವೇಶನ (Budget Session) ಬಗ್ಗೆ ಇನ್ನೂ ಕ್ಯಾಬಿನೆಟ್‌ನಲ್ಲಿ (Cabinet) ತೀರ್ಮಾನ ಮಾಡಿಲ್ಲ. ಆದರೆ ಜುಲೈ 3 ರಂದು ಬಜೆಟ್ ಅಧಿವೇಶನ ಪ್ರಾರಂಭ ಆಗಲಿದೆ. 1 ವಾರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದ್ದು ಜುಲೈ 7 ರಂದು ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ತಿಳಿಸಿದರು

ಬಜೆಟ್ ಗಾತ್ರ ಎಷ್ಟು ಇದೆ ಎನ್ನುವುದು ಚರ್ಚೆ ಮಾಡುತ್ತೇವೆ. ಈಗಿರುವ ಬಜೆಟ್ ಬಿಜೆಪಿಯವರ ಚುನಾವಣೆ ಬಜೆಟ್ ಆಗಿತ್ತು. ಬಜೆಟ್ ಬಳಿಕ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿದರು.
