
ಶಾಸಕ ಭರತ್ ಶೆಟ್ಟಿ ಅವರು ವಿಜಯೋತ್ಸವದ ವೇಳೆ ತಲವಾರು ಜಳಪಿಸುವ ಮೂಲಕ ಹಿಂಸೆಗೆ ಪ್ರಚೋದನೆ ಮಾಡಿದ್ದಾರೆ.
ಓರ್ವ ವೈದ್ಯ ಮತ್ತು ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಹಾಗೂ ಸಾಮರಸ್ಯಕ್ಕೆ ಒತ್ತು ನೀಡಬೇಕಾದವರು ತಲವಾರು ಪ್ರದರ್ಶನ ಮಾಡುವ ಮೂಲಕ ಯುವ ಜನರಿಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ ಪ್ರಶ್ನಿಸಿದ್ದಾರೆ.

ಸೌಹಾರ್ದದ ಹಾಗೂ ಸಹಿಷ್ಣುತೆಯ ಸಂದೇಶ ನೀಡುವ ಮೂಲಕ ಯುವ ಜನರಿಗೆ ಮಾದರಿಯಾಗಬೇಕಾಗಿದ್ದ ಶಾಸಕ ಭರತ್ ಶೆಟ್ಟಿ ಅವರು ಯುವಕರನ್ನು ತಪ್ಪು ದಾರಿಗೆ ಪ್ರಚೋದಿಸುತ್ತಿದ್ದಾರೆ. ಈ ನಡೆ ಖಂಡನೀಯ.
ಮಾರಕ ಶಸ್ತ್ರ ಪ್ರದರ್ಶನವನ್ನು ಸಾರ್ವಜನಿಕವಾಗಿ ಮಾಡಿದರೆ ಯಾವ ರೀತಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆಯೋ, ಅದೇ ರೀತಿ ಈ ಪ್ರಕರಣದಲ್ಲೂ ಕೂಡಾ ಭರತ್ ಶೆಟ್ಟಿ ಮೇಲೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಇನಾಯತ್ ಅಲಿ ಆಗ್ರಹಿಸಿದ್ದಾರೆ.
