Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    Breaking: ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ.. ಬಿಗ್​​ ಅನೌನ್ಸ್​ಮೆಂಟ್​ ನಿರೀಕ್ಷೆ

    ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಮಾಹಿತಿ ಹಕ್ಕು ಕಾಯ್ದೆ | ತುಮಕೂರು ಜಿಲ್ಲೆಯಲ್ಲಿ 1,323 ಮೇಲ್ಮನವಿ ಬಾಕಿ: ಬದ್ರುದ್ದೀನ್ ಕೆ.ಮಾಣಿ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    ಸೋಲುವ ಭಯ.. ಒಮಾನ್​ ವಿರುದ್ಧ ಗೆಲ್ಲಲು ಹರಸಾಹಸಪಟ್ಟ ಸೂರ್ಯಕುಮಾರ್​ ಪಡೆ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಜ್ಯ

ವಿಧಾನಸಭೆ ಸ್ಪೀಕರ್ ಆಗಿ ಯುಟಿ ಖಾದರ್ ಸರ್ವಾನುಮತದಿಂದ ಆಯ್ಕೆ, ಸಿದ್ದರಾಮಯ್ಯ-ಬೊಮ್ಮಾಯಿ ಹೇಳಿದ್ದೇನು?

editor tv by editor tv
May 24, 2023
in ರಾಜ್ಯ
0
ವಿಧಾನಸಭೆ ಸ್ಪೀಕರ್ ಆಗಿ ಯುಟಿ ಖಾದರ್ ಸರ್ವಾನುಮತದಿಂದ ಆಯ್ಕೆ, ಸಿದ್ದರಾಮಯ್ಯ-ಬೊಮ್ಮಾಯಿ ಹೇಳಿದ್ದೇನು?
1.9k
VIEWS
Share on FacebookShare on TwitterShare on Whatsapp

ಬೆಂಗಳೂರು: ನಿರೀಕ್ಷೆಯಂತೆ ಯುಟಿ ಖಾದರ್ (UT Khader) ಅವರು ಸರ್ವಾನುಮತದಿಂದ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಇಂದು(ಮೇ 24) ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಮಂಗಳೂರು ಶಾಸಕ ಯುಟಿ ಖಾದರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಪ್ರಸ್ತಾವನೆ ಮಾಡಿದರು. ಸಿಎಂ ಪ್ರಸ್ತಾವವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅನುಮೋದಿಸಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪೀಕರ್​ ಯುಟಿ ಖಾದರ್ ಅವರಿಗೆ ಅಭಿನಂದಿಸಿ ಅವರು ನಡೆಬಂದ ರಾಜಕೀಯ ಹಾದಿಯನ್ನು ಮೆಲುಕು ಹಾಕಿದರು. ಅಲ್ಲದೇ ಸ್ಪೀಕರ್​ ಯುಟಿ ಖಾದರ್​​ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಮಾತನಾಡಿದರು.

ಸ್ಪೀಕರ್ ಖಾದರ್ ಬಗ್ಗೆ ಸಿದ್ದರಾಮಯ್ಯ ಮಾತು

ಸಿಎಂ ಸಿದ್ದರಾಮಯ್ಯ ಮಾತನಾಡಿ,  ವಿಧಾನಸಭೆಯಲ್ಲಿ ಅತಿ ಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಯು.ಟಿ.ಖಾದರ್​ ಅವರಿಗೆ ಸದನವೀರ ಪ್ರಶಸ್ತಿಯೂ ಸಿಕ್ಕಿತ್ತು. ವಿಪಕ್ಷ ಉಪನಾಯಕರಾಗಿಯೂ ಯು.ಟಿ.ಖಾದರ್​ ಉತ್ತಮ ಕೆಲಸ ಮಾಡಿದ್ದಾರೆ. ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಸದನ ಮೇಲ್ಮಟ್ಟಕ್ಕೆ ಹೋಗಲಿ. ಖಾದರ್​ ಬಹಳ ತಾಳ್ಮೆ ವ್ಯಕ್ತಿ, ಆ ತಾಳ್ಮೆಯನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.

ವಿಧಾನಸಭೆಯಲ್ಲಿ ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚಿಸಬೇಕು. ನಾಡಿನ ಅಭಿವೃದ್ಧಿ, 7 ಕೋಟಿ ಕನ್ನಡಿಗರ ಹಿತರಕ್ಷಣೆ ಆಗಬೇಕು. ರಾಜ್ಯದ ಜಿಡಿಪಿ ಬೆಳವಣಿಗೆ ಕೂಡ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲೊ್ಲಿ ಸ್ಪೀಕರ್ ಸ್ಥಾನ ಅತ್ಯುನ್ನತವಾದದ್ದು. ಸದನದಲ್ಲಿ ನಾವು ಬಹಳ ಹೆಚ್ಚರಿಕೆಯಿಂದ ಪದ ಬಳಕೆ ಮಾಡಬೇಕು. ಆಡಳಿತ, ವಿರೋಧ ಪಕ್ಷದ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಬೇಕು ಎಂದರು.

ನೂತನ ಸ್ಪೀಕರ್​ ಬಗ್ಗೆ ಬೊಮ್ಮಾಯಿ ಹೇಳಿದ್ದೇನು?

ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ನೂತನ ಸ್ಪೀಕರ್​ ಖಾದರ್​ಗೆ ಅಭಿನಂದನೆ ತಿಳಿಸಿ ಮಾತನಾಡಿದ ಅವರು, ಕರ್ನಾಟಕದ ವಿಧಾನಮಂಡಲಕ್ಕೆ ತನ್ನದೇ ಆದ ಇತಿಹಾಸವಿದೆ. ಇಡೀ ದೇಶಕ್ಕೆ ಮಾರ್ಗದರ್ಶನ ನೀಡಿದ ವಿಧಾನಮಂಡಲವಿದು, ಯು.ಟಿ.ಖಾದರ್​ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಯು.ಟಿ.ಖಾದರ್ ವಿಪಕ್ಷ ಉಪನಾಯಕರಾಗಿಯೂ ಉತ್ತಮ ಕೆಲಸ ಮಾಡಿದ್ದಾರೆ. ಈ ಹಿಂದೆ ಸ್ಪೀಕರ್​ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.

ನ್ಯಾಯಾಂಗಕ್ಕಿಂತ ಎತ್ತರವಾದದ್ದು ಸ್ಪೀಕರ್​ ಸ್ಥಾನ. ಹಾಗಾಗಿ ನಿಷ್ಪಕ್ಷಪಾತವಾಗಿ ತಾವು ಸದನವನ್ನು ನಡೆಸಬೇಕು. ಪ್ರತಿಪಕ್ಷ ಸದಸ್ಯರ ಹೇಳಿಕೆಗೆ ಸ್ಪೀಕರ್​ ಹೆಚ್ಚು ಅವಕಾಶ ಕೊಡಬೇಕು. ಚರ್ಚೆ ವೇಳೆ ಕೊನೆಯ ಸಾಲಿನವರಿಗೆ ಹೆಚ್ಚು ಅವಕಾಶ ಕೊಡಬೇಕು. ಸ್ಪೀಕರ್ ಹೊಸ ವಿಚಾರಕ್ಕೆ ಅವಕಾಶ ಮಾಡಿಕೊಡುವ ವಿಶ್ವಾಸವಿದ್ದು, ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಶಕ್ತಿ ನಿಮ್ಮಲ್ಲಿದೆ ಎಂದು ಹೇಳಿದರು.

ನೂತನ ಸ್ಪೀಕರ್​ಗೆ ಡಿಕೆ ಶಿವಕುಮಾರ್ ಅಭಿನಂದನೆ ಮಾತುಗಳು

ನೂತನ ಸ್ಪೀಕರ್ ಯು.ಟಿ.ಖಾದರ್​ಗೆ ಅಭಿನಂದನೆ ತಿಳಿಸಿದ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಯು.ಟಿ.ಖಾದರ್​ರನ್ನು ಸೇವಾದಳ ಕಾರ್ಯಕರ್ತನಾಗಿ ನೋಡಿದ್ದೇನೆ. ಸ್ಪೀಕರ್ ಸ್ಥಾನ ಬಹಳ ಶ್ರೇಷ್ಠವಾದದ್ದು. ಈ ಹಿಂದೆ ರಮೇಶ್ ಕುಮಾರ್ ಯುವ ಶಾಸಕರನ್ನು ಎಬ್ಬಿಸುತ್ತಿದ್ದರು. ನಾವು ತಪ್ಪು ಮಾಡದಂತೆ ವಿಪಕ್ಷದವರು ಎಚ್ಚರಿಕೆ ಕೊಡುತ್ತಿರಲಿ. ಕೋಮು ಸೌಹಾರ್ದತೆಗೆ ಮತ್ತೊಂದು ಹೆಸರು ಯು.ಟಿ.ಖಾದರ್​. ಎಲ್ಲರಿಗೂ ನೀವು ನ್ಯಾಯ ಒದಗಿಸಿ. ನಾವು ತಪ್ಪು ಮಾಡಿದರೂ ಸ್ಪೀಕರ್ ತಿದ್ದಿ ನಡೆಸಲಿ. ಸಭಾಧ್ಯಕ್ಷರು ಎಲ್ಲರನ್ನೂ ಸಮಾನವಾಗಿ ನೋಡಿ ಎಂದರು.

Previous Post

ಶಾಸಕಿ ನಯನಾ ಖಾಸಗಿ ಫೋಟೋಗಳ ವಿಚಾರ : ನಟ ಚೇತನ್ ಬೇಸರ

Next Post

UT Khader Profile: ವಿಧಾನಸಭೆ ನೂತನ ಸ್ಪೀಕರ್ ಯುಟಿ ಖಾದರ್, ಇಲ್ಲಿದೆ ಕರಾವಳಿ ರಾಜಕಾರಣಿಯ ರಾಜಕೀಯ ಖದರ್

Next Post
UT Khader Profile: ವಿಧಾನಸಭೆ ನೂತನ ಸ್ಪೀಕರ್ ಯುಟಿ ಖಾದರ್, ಇಲ್ಲಿದೆ ಕರಾವಳಿ ರಾಜಕಾರಣಿಯ ರಾಜಕೀಯ ಖದರ್

UT Khader Profile: ವಿಧಾನಸಭೆ ನೂತನ ಸ್ಪೀಕರ್ ಯುಟಿ ಖಾದರ್, ಇಲ್ಲಿದೆ ಕರಾವಳಿ ರಾಜಕಾರಣಿಯ ರಾಜಕೀಯ ಖದರ್

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.