
RBI Withdraws Rs 2,000 Notes From Circulation: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದರೆ, ಈ ಕರೆನ್ಸಿ ನೋಟುಗಳು ಲೀಗಲ್ ಅಗಿ ಮುಂದುವರಿಯಲಿವೆ.
ನವದೆಹಲಿ: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದರೆ, ಈ ಕರೆನ್ಸಿ ನೋಟುಗಳು ಲೀಗಲ್ ಅಗಿ ಮುಂದುವರಿಯಲಿವೆ. ಆರ್‌ಬಿಐ ಶುಕ್ರವಾರ ಈ ಹೇಳಿಕೆ ನೀಡಿದೆ.

2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಬೇಕು. ಅವುಗಳನ್ನು 2023ರ ಸೆಪ್ಟೆಂಬರ್ 30 ರೊಳಗೆ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಿ ಎಂದು ಆರ್‌ಬಿಐ ಪ್ರಕಟಣೆ ಮೂಲಕ ಸೂಚಿಸಿದೆ.
ಸೆ.30 ರವರೆಗೆ 2,000 ರೂ. ಮುಖಬೆಲೆಯ ನೋಟುಗಳನ್ನು ಗ್ರಾಹಕರು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು ಅವಕಾಶ ಇರುತ್ತದೆ. ಅ.1 ರಿಂದ ಈ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ.
ಸಾರ್ವಜನಿಕರು ತಮ್ಮಲ್ಲಿರುವ 2,000 ರೂಪಾಯಿ ನೋಟುಗಳನ್ನು ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಬಹುದು. ಇನ್ನು 2,000 ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲು ಒಂದು ನಿರ್ಬಂಧ ವಿಧಿಸಲಾಗಿದೆ. ಬ್ಯಾಂಕ್ ಚಟುವಟಿಕೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಒಂದು ದಿನ ಒಬ್ಬ ವ್ಯಕ್ತಿಗೆ ಗರಿಷ್ಛ 20,000 ರೂಪಾಯಿ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೇ.23 ರಿಂದ ಬ್ಯಾಂಕ್‌ಗಳಲ್ಲಿ 2,000 ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.ಸಾರ್ವಜನಿಕರು ಮಾತ್ರವಲ್ಲ ಬ್ಯಾಂಕ್ ಕೂಡ ಸೆಪ್ಟೆಂಬರ್ 30ರೊಳಗೆ 2,000 ರೂಪಾಯಿ ನೋಟಿನ ಎಲ್ಲಾ ವಿನಿಮಯ, ಜಮಾವಣೆ ಮುಗಿಸಬೇಕು ಎಂದು ಆರ್‌ಬಿಐ ಹೇಳಿದೆ.

