


ಉಳ್ಳಾಲ :ದೇರಳಕಟ್ಟೆಯ ಕಣಚೂರು ಮಹಿಳಾ ಪದವಿಪೂರ್ವ ಕಾಲೇಜು ಶೇ.100 ಫಲಿತಾಂಶ ದಾಖಲಿಸಿದೆ.ಪರೀಕ್ಷೆಗೆ ಹಾಜರಾದ 121 ವಿದ್ಯಾರ್ಥಿನಿಯರಲ್ಲಿ 35 ವಿದ್ಯಾರ್ಥಿನಿಯರು ಉತ್ತಮ ಶ್ರೇಣಿಯಲ್ಲಿ ಹಾಗೂ 78 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿಜ್ಞಾನ ವಿಭಾಗ ದಲ್ಲಿ (PCMB)26 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಸೌಧ 570, ಆಯಿಷತುಲ್ ನಿಹಾ 567, ಅಸಿಯಾ ಫಾತಿಮಾ ಹಮ್ನ 565 ಅಂಕಗಳನ್ನು ಪಡೆದಿದ್ದಾರೆ.ವಾಣಿಜ್ಯ ವಿಭಾಗದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 8 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿ ಯಲ್ಲಿ ತೇರ್ಗಡೆಯಾಗಿದ್ದು, ನಿಹಾ ಫಾತಿಮಾ 562, ಆಯಿಷಾ ಫಾತಿಮಾ 549 ಅಂಕ ಗಳಿಸಿದ್ದಾರೆ, ವಾಣಿಜ್ಯ ಇತಿಹಾಸ ಮತ್ತು ಕಲಾ ವಿಭಾಗ ದಲ್ಲಿ ಎಲ್ಲಾ ವಿದ್ಯಾರ್ಥಿನಿಯರು ಉತ್ತಮ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿದ್ದಾರೆ.ಫಾತಿಮತ್ ಶೈಮಾ ಎಂ. ಎಸ್ 557 ಅಂಕ ಗಳಿಸಿದ್ದಾರೆ.

