

ಮಂಗಳೂರು :ನನ್ನ ಹತ್ಯೆಗೆ ವ್ಯವಸ್ಥಿತ ಸಂಚು ನಡೆಯುತ್ತಿದ್ದು ಒಂದುವೇಳೆ ಹತ್ಯೆ ಯಾದರೆ ಅದಕ್ಕೆ ಬಿ ಜೆ ಪಿ ರಾಜ್ಯಾಧ್ಯಕ್ಷ ಮತ್ತು ಅವರ ತಂಡ ಹೊಣೆ ಎಂದು ಹಿಂದೂ ಪರ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಕಳೆದ 16 ವರ್ಷ ಗಳಿಂದ ಜೀವ ಬೆದರಿಕೆ ಇದ್ದ ಕಾರಣ ನನಗೆ ಸರಕರವೇ ಭದ್ರತೆ ನೀಡಿತ್ತು.16 ವರ್ಷ ಇದ್ದ ಸಿಬಂದಿ ಯನ್ನು ಈಗ ಚುನಾವಣೆ ನೆಪದಲ್ಲಿ ವಾಪಾಸ್ ಪಡೆಯಲಾಗಿದೆ. ನನ್ನ ಹತ್ಯೆಗೆ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ ರಿವಲ್ವಾರ್ ಕೂಡ ತೆಗೆದಿಟ್ಟು ಕೊಂಡಿದ್ದಾರೆ
ಈ ಬಗ್ಗೆ ಹೋಂ ಮಿನಿಸ್ಟರ್, ಸಂಘ ಪರಿವಾರದ ಪ್ರಮುಖರಿಗೆ ಹೇಳಿದರೂ ಪ್ರಯೋಜನವಾಗಿಲ್ಲ, ಅಧಿಕಾರಿ ಗಳಿಗೆ ಕೂಡ ಮನವಿ ಮಾಡಿದ್ದೇನೆ. ನನಗೆ ಈಗಲೂ ಬೆದರಿಕೆ ಇರುವುದರಿಂದ ಭದ್ರತೆ ಮುಂದುವರಿಸಬೇಕೆಂದು ಬಿಲ್ಲವ ನಾಯಕ ಅಗ್ರಹಿಸಿದ್ದಾರೆ.


ಆಕಸ್ಮಾತ್ ದುಷ್ಕರ್ಮಿಗಳ ಕೈಗೆ ಸಿಕ್ಕಿ ಬಲಿಯಾದರೆ ಅದಕ್ಕೆ ನೇರ ಕಾರಣ ರಾಜ್ಯಾಧ್ಯಕ್ಷ, ಆತನ ತಂಡ ಮತ್ತು ದುಡ್ಡು ಕೊಟ್ಟು ಗನ್ ಮ್ಯಾನ್ ಪಡೆದುಕೊಳ್ಳಿ ಎಂದು ಹೇಳಿದ ನಿರ್ಣಯ ಸಮಿತಿ ಹೊಣೆಯಾಗಿದೆ ಎಂದರು.
ನನ್ನ ಹತ್ಯೆ ನಡೆದರೆ ಯಾರೂ ಕೂಡಾ ನನ್ನ ಶವ ದರ್ಶನಕ್ಕೆ ಬರಬಾರದು. ನನ್ನ ಮೆರವಣಿಗೆ ನಡೆಸಬಾರದು. ಅದೇನೇ ಆದರೂ ನಾವು ಅದನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿದ್ದೇವೆ. ಇಂದು ಹಿಂದುತ್ವದ ನೈಜ ಹೋರಾಟಗಾರರಿಗೆ ಇಂದು ಬೆಲೆ ಇಲ್ಲದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.


‘ಈ ಬಗ್ಗೆ ಕಾರ್ಯಕರ್ತರಿಗೆ ಸೂಚನೆ ನೀಡುತ್ತಿದ್ದೇನೆ. ಹಿಂದುತ್ವಕ್ಕಾಗಿ ನನ್ನ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ. ಈಗ ಹಿಂದುತ್ವದ ನೈಜ ಹೋರಾಟಗಾರರಿಗೆ ಬೆಲೆ ಇಲ್ಲ. ಹಿಂದುತ್ವ ಸ್ವಾರ್ಥ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ಹಿಂದೂ ಕಾರ್ಯಕರ್ತರಿಗೆ ಕರೆ ನೀಡುತ್ತಿದ್ದೇನೆ.ನಿಮ್ಮ ಜೀವನಕ್ಕೆ ನೀವೇ ಹೊಣೆಗಾರರು, ಯಾರನ್ನೂ ನಂಬಿ ಹೋರಾಟಕ್ಕೆ ಇಳಿಯಬೇಡಿ. ಹಿಂದೂ ಸಂಘಟನೆಯಲ್ಲಿದ್ದವರು ಯಾವುದೇ ಕಾರಣಕ್ಕೂ ಪಕ್ಷ ಹಾಗೂ ಸರ್ಕಾರದ ವಿರುದ್ಧ ಮಾತನಾಡಬಾರದು, ಮಾತನಾಡಿದವರ ವಿರುದ್ಧ ಷಡ್ಯಂತ್ರ ಮಾಡಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಂಗಳೂರಿನಲ್ಲಿ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.