

ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬದ್ರಿಯಾ ಖುವ್ವತ್ತುಲ್ ಇಸ್ಲಾಂ ಮದ್ರಸ ಗಾಂಧಿನಗರ (ಕಕ್ಕಿಂಜೆ) ಇಲ್ಲಿನ ವಿದ್ಯಾರ್ಥಿಗಳು ಈ ವರ್ಷ ನಡೆದ ಐದನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 14 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಆರು ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ಆಗಿದ್ದಾರೆ. ಮದ್ರಸಾ ಅಧ್ಯಾಪಕರಾದ ಮುಹಮ್ಮದ್ ಖಲಂದರ್ ಅಝ್ಹರಿ ಕುಪ್ಪೆಟ್ಟಿ, ಇಸಾಖ್ ದಾರಿಮಿ ಮಾಡನ್ನೂರ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಉತ್ತಮ ಫಲಿತಾಂಶಕ್ಕಾಗಿ
ಸಹಕರಿಸಿದ ಪೋಷಕರಿಗೆ ಧನ್ಯವಾದ ಹಾಗೂ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಬದ್ರಿಯಾ ಖುವ್ವತ್ತುಲ್ ಇಸ್ಲಾಂ ಮದ್ರಸ ಕಮಿಟಿಯು ಅಭಿನಂದನೆ ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

