

ಲಖನೌ (ಏಪ್ರಿಲ್ 15, 2023): ಉತ್ತರ ಪ್ರದೇಶದಲ್ಲಿ ಮುುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ 2017 ರಿಂದ ಈವರೆಗಿನ 6 ವರ್ಷದಲ್ಲಿ ಒಟ್ಟು 183 ಎನ್‌ಕೌಂಟರ್ ಮಾಡಲಾಗಿದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ. ‘ರಾಜ್ಯದಲ್ಲಿ ಮಾಫಿಯಾವನ್ನು ಮಣ್ಣು ಮಾಡಲಾಗುವುದು’ ಎಂದು ಯೋಗಿ ಇತ್ತೀಚೆಗೆ ಹೇಳಿದ್ದರು. ಇದಾದ ಕೆಲ ದಿನಗಳಲ್ಲೇ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನ ಪುತ್ರನ ಎನ್‌ಕೌಂಟರ್ ಗುರುವಾರ ನಡೆದಿತ್ತು. ಇದರ ಬೆನ್ನಲ್ಲೇ ಈ ಅಂಕಿ ಅಂಶ ಲಭಿಸಿದೆ.

ಯೋಗಿ ಸರ್ಕಾರ (Yogi Adityanath Government) ಬಂದ ಬಳಿಕ ಕ್ರಿಮಿನಲ್‌ಗಳ (Criminals) ಮನೆಯನ್ನು ಬುಲ್ಡೋಜರ್‌ನಿಂದ ಧ್ವಂಸಗೊಳಿಸುವುದು ಸೇರಿ ಕ್ರಿಮಿನಲ್‌ಗಳ ವಿರುದ್ಧ ಅನೇಕ ಕಠಿಣ ಕ್ರಮ ಕೈಗೊಳ್ಳಲಾಗಿದೆ. 2017ರ ಮಾರ್ಚ್‌ನಿಂದ ಈವರೆಗೆ ರಾಜ್ಯದಲ್ಲಿ ಪೊಲೀಸರು (Police) ನಡೆಸಿದ ಒಟ್ಟು 10,900 ಎನ್‌ಕೌಂಟರ್‌ಗಳಲ್ಲಿ (Encounters) 23,300 ಕ್ರಿಮಿನಲ್‌ಗಳನ್ನು ಬಂಧಿಸಲಾಗಿದ್ದು (Arrest) ಘಟನೆಗಳಲ್ಲಿ 5,046 ಕ್ರಿಮಿನಲ್‌ಗಳು ಗಾಯಗೊಂಡಿದ್ದಾರೆ (Injured).

ಮಾರ್ಚ್ 2017 ರಿಂದ ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟ 13 ಪೊಲೀಸರ ಪೈಕಿ ಕಾನ್ಪುರದಲ್ಲಿ ದಾಳಿಗೆ ಬಲಿಯಾದ 8 ಪೊಲೀಸರು ಸೇರಿದ್ದಾರೆ. ಗ್ಯಾಂಗ್‌ಸ್ಟರ್ ವಿಕಾಸ್ ದುಬೆಯ ಸಹಾಯಕರು ಹೊಂಚು ಹಾಕಿ ಈ ದಾಳಿ ನಡೆಸಿದ್ದರು. ಮಧ್ಯಪ್ರದೇಶದ ಉಜ್ಜಯಿನಿಯಿಂದ ಉತ್ತರ ಪ್ರದೇಶಕ್ಕೆ ಗ್ಯಾಂಗ್‌ಸ್ಟರ್‌ನನ್ನು ಕರೆತರುತ್ತಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ವಿಕಾಸ್ ದುಬೆ ಅವರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದರು. ಈ ವೇಳೆ ವಿಕಾಸ್ ದುಬೆ ಅವರ ವಾಹನ ಪಲ್ಟಿಯಾಗಿದೆ ಮತ್ತು ಅವರು ಪೊಲೀಸ್ ಬಂದೂಕನ್ನು ಕಸಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.ಆದರೆ ಇವುಗಳು ನಕಲಿ ಎನ್‌ಕೌಂಟರ್‌ಗಳಾಗಿದ್ದು (Fake Encounters) ಈ ಕುರಿತು ಉನ್ನತ ತನಿಖೆ ನಡೆಯಬೇಕು ಎಂಬ ವಿಪಕ್ಷಗಳ (Opposition) ಆರೋಪವನ್ನು ಪೊಲೀಸ್ ಹಾಗೂ ಯೋಗಿ ಸರ್ಕಾರ ತಳ್ಳಿ ಹಾಕಿವೆ.
ಝಾನ್ಸಿಯಲ್ಲಿ ಅವರ ಹತ್ಯೆಯಾದ ಗಂಟೆಗಳ ನಂತರ, ಅಖಿಲೇಶ್ ಯಾದವ್ ಅವರು ಪೊಲೀಸ್ ಎನ್‌ಕೌಂಟರ್ “ನಕಲಿ” ಎಂದು ಸೂಚಿಸಿದರು. ಬಳಿಕ, ಮಾಯಾವತಿ ಕೂಡ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.
