

ಬಂಟ್ವಾಳ :ಮುಹಿಯ್ಯುದ್ದೀನ್ ಜುಮಾ ಮಸೀದಿ ಇದರ ವ್ಯಾಪ್ತಿಯಲ್ಲಿ ಬರುವ ಮದರಸಕ್ಕೆ ಸಮಸ್ತ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2022-23 ರ 5ನೇ, 7ನೇ, ಮತ್ತು 10ನೇ ತರಗತಿಗೆ ನಡೆದ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಮಿತ್ತಬೈಲ್ ಕೇಂದ್ರ ಮಸೀದಿ ವ್ಯಾಪ್ತಿಯಲ್ಲಿ ಬರುವ, ಮುಹಿಯ್ಯುದ್ದೀನ್ ಮದರಸ ಮಿತ್ತಬೈಲ್, ಅನ್ಸಾರಿಯ ಇಸ್ಲಾಮಿಕ್ ಮದರಸ ನಂದರಬೆಟ್ಟು , ದಾರುಲ್ ಮುಆರಿಫೀನ್ ಮದರಸ ಕೆಳಗಿನ ಮಿತ್ತಬೈಲ್, ಹಿದಾಯತ್ತುಲ್ ಇಸ್ಲಾಂ ಮದರಸ ತಾಳಿಪಡ್ಪು 100% ಶೇ ಹಾಗೂ ಖಿದ್ಮತ್ತುಲ್ ಇಸ್ಲಾಂ ಮದರಸ ಪರ್ಲಿಯಾ 98% ಶೇ ಫಲಿತಾಂಶ ದೊಂದಿಗೆ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಮಿತ್ತಬೈಲ್ ಕೇಂದ್ರ ಜಮಾಅತ್ ಆಡಳಿತ ಕಮಿಟಿಯು ಅಭಿನಂದನೆಗಳು ಸಲ್ಲಿಸುತ್ತಿದೆ,
ವಿದ್ಯಾರ್ಥಿಗಳ ಈ ಉತ್ತಮ ಸಾಧನೆಗೆ ಶ್ರಮವಹಿಸಿದ ಸದರ್ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳ ಪೋಷಕರಿಗೆ ಕೇಂದ್ರ ಮಸೀದಿ ಅಧ್ಯಕ್ಷರಾದ ಸೈಯ್ಯದ್ ಫಲುಲ್ ತಂಗಳ್ ಕೃತಜ್ಞತೆ ಸಲ್ಲಿಸಿದ್ದಾರೆ



