

ವರದಿ :ಹಂಝ ಬಂಟ್ವಾಳ
ಬಂಟ್ವಾಳ :ನೆರೆ ಹೊರೆಯ ಇಬ್ಬರು ಯುವತಿಯರು ಹೊಟ್ಟೆ ನೋವಿನಿಂದ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಮೃತ ಯುವತಿ ಯರನ್ನು ನೆಲ್ಯಾಡಿ ಪಟ್ರಮೆ ಗ್ರಾಮ ದ ಪಟ್ಟೋರಿ ಬಾಬು ಎಂಬರ ಮಗಳು ರಕ್ಷಿತಾ (22) ಹಾಗೂ ಶ್ರೀನಿವಾಸ್ ಆಚಾರ್ಯರ ಮಗಳು ಲಾವಣ್ಯ (21) ಎಂದು ತಿಳಿದುಬಂದಿದೆ.



ಇವರಿಬ್ಬರೂ ಸೇವಾ ಪ್ರತಿನಿಧಿಗಳ ಗಿ ಕರ್ತವ್ಯ ನಿರ್ವಹಿಸುತ್ತಿದ್ದರು.2 ದಿನಗಳ ಹಿಂದೆ ಸಂಜೆ ಮನೆಯಲ್ಲಿ ಹೊಟ್ಟೆ ನೋವಿಂದ ನರಳುತ್ತಿದ್ದ ಇವರನ್ನು ಸ್ಥಳೀಯ ನೆರವಿನೊಂದಿಗೆ ಒಬ್ಬರನ್ನು ಮಂಗಳೂರು ಹಾಗೂ ಸುರತ್ಕಲ್ ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ ಅಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಇಬ್ಬರು ಮೃತಪಟ್ಟಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

