

ಬಂಟ್ವಾಳ : ಯಾತ್ರಾರ್ಥಿ ಉಪವಾಸಿಗರಿಗೆ ಅನುಕೂಲ ಆಗುವಂತೆ ಬಿ. ಸಿ ರೋಡ್ ನಾರಾಯಣ ಗುರು ವೃತ್ತ ದಲ್ಲಿ SKSSF ವಿಖಾಯ ಬಂಟ್ವಾಳ ವಲಯ ತಂಡವು ಉಚಿತ ಇಫ್ತಾರ್ ವ್ಯವಸ್ಥೆ ಯನ್ನು ಮಾಡುತ್ತಿರುವುದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಹಲವು ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿರುವ SKSSF ಬಂಟ್ವಾಳ ವಲಯ ವಿಖಾಯ ತಂಡ ಈ ವರ್ಷ ಉಚಿತ ಇಫ್ತಾರ್ ವ್ಯವಸ್ಥೆ ಮಾಡಿರುವಂತಹದ್ದು ನಿಜಕ್ಕೂ ಶ್ಲಾಘನೀಯ . ಉಪವಾಸ ತೊರೆಯುವ ಸಮಯದಲ್ಲಿ ಯಾತ್ರೆ ಯಲ್ಲಿ ಇರುವ ಉಪವಾಸಿಗರಿಗೆ ಮಿತ್ತಬೈಲ್ ಮಸೀದಿ ಯ ನಂತರ ಬಿ.ಸಿ ರೋಡಿನಿಂದ ಯಾವುದೇ ವ್ಯವಸ್ಥೆ ಇರುವುದಿಲ್ಲ, ಇದನ್ನು ಅರಿತ ಎಸ್ ಕೆ ಎಸ್ ಎಫ್ ವಿಖಾಯ ತಂಡವು ಹೆದ್ದಾರಿಯ ಮುಖ್ಯ ವೃತ್ತ ದಲ್ಲಿ ಈ ಒಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ಹಲವಾರು ಪ್ರವಾಸಿಗರು ಹಾಗೂ ಇತರ ವಾಹನ ಚಾಲಕರಿಗೆ ತುಂಬಾ ಉಪಯೋಗವಾಗಿದೆ ಎಂಬುದರಲ್ಲಿ ಒಂದು ಮಾತಿಲ್ಲ .

ಇವರು ವಾಹನ ದಲ್ಲಿ ಪ್ರಯಾಣಿಸುವ ಕೇವಲ ಉಪವಾಸಿಗರಿಗಲ್ಲದೆ ಜಾತಿ ಧರ್ಮ ನೋಡದೆ ಸುಮಾರು 300ಕ್ಕೂ ಅಧಿಕ ಇಫ್ತಾರ್ ಕೀಟ್ಟ್ ನೀಡುತ್ತಿರುವುದು ಇನ್ನೊಂದು ವಿಶೇಷ. ಪ್ರತಿದಿನ SKSSF ಬಂಟ್ವಾಳ ವಲಯದ ಶಾಖೆಗಳ ವತಿಯಿಂದ ಆಯೋಜಿಸುತ್ತಿದ್ದಾರೆ. ಇದರ ನೇತೃತ್ವವನ್ನು ಬಹು ಇರ್ಷಾದ್ ದಾರಿಮಿ ಉಸ್ತಾದ್ ಮಿತ್ತಬೈಲ್ ಇವರೊಂದಿಗೆ ವಲಯ ನಾಯಕರು ಹಾಗೂ SKSSF, ವಿಖಾಯ,ಕಾರ್ಯಕರ್ತರು ಕೈಜೋಡಿಸುತ್ತಿರುವುದು ನಾವಿಲ್ಲಿ ಕಾಣಬಹುದಾಗಿದೆ. ಒಟ್ಟಿನಲ್ಲಿ ಈ ಒಂದು ಕಾರ್ಯ ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದ್ದು,ಮುಂದೆ ಇಂತಹ ಹಲವಾರು ಸಮಾಜಮುಖಿ ಕಾರ್ಯ ನಡೆಯಲಿ ಎಂದು ಜನರ ಅನಿಸಿಕೆ ಯಾಗಿದೆ..



