

ಬೆಂಗಳೂರು: ಜಿಎಸ್‍ಟಿ (GST) ಅಧಿಕಾರಿಗಳು ದಾಳಿ ನಡೆಸಿ ಮತದಾರರಿಗೆ ಹಂಚಲು ತಂದಿದ್ದ ಮೂರು ಕೋಟಿ ರೂ. ಮೌಲ್ಯದ ಕುಕ್ಕರ್, ಗಡಿಯಾರ ಹಾಗೂ ಪಾತ್ರೆಗಳನ್ನು ಜಪ್ತಿ ಮಾಡಿದ್ದಾರೆ.
ಬ್ಯಾಟರಾಯನಪುರ (Byataryanapura) ಬಿಜೆಪಿ (BJP) ಟಿಕೆಟ್ ಆಕಾಂಕ್ಷಿ ಮುನೇಂದ್ರ ಕುಮಾರ್ ಅವರಿಗೆ ಸೇರಿದೆ ಎನ್ನಲಾದ ಮಳಿಗೆ ಮೇಲೆ ಜಿಎಸ್‍ಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಮತದಾರರಿಗೆ ಹಂಚಲು ಇಂಟರ್‌ನ್ಯಾಷನಲ್ ಶಾಲೆಯ (International School) ಹಿಂಭಾಗದ ಮೂರು ಮಳಿಗೆಗಳಲ್ಲಿ ವಸ್ತುಗಳನ್ನು ಸಂಗ್ರಹಿಸಿದ್ದಾರೆ ಎಂಬ ಖಚಿತ ಮಾಹಿತಿ ತಿಳಿದು ಅಧಿಕಾರಿಗಳು ಮುಂಜಾನೆ ದಾಳಿ ಮಾಡಿದ್ದಾರೆ.

