

ಶಿವಮೊಗ್ಗ: ಜಿಲ್ಲೆಯ ಡಿಸಿ ಕಚೇರಿ ಆವರಣದಲ್ಲಿ(Shivamogga DC Office) ನಿಂತು ಯುವಕನೋರ್ವ ಆಜಾನ್(Azaan) ಕೂಗಿದ ಘಟನೆ ನಡೆದಿದ್ದು ಸ್ಥಳೀಯರ ಮೊಬೈಲ್ನಲ್ಲಿ ದೃಶ್ಯ ಸೆರೆಯಾಗಿದೆ. ಕೆಎಸ್ ಈಶ್ವರಪ್ಪ(KS Eshwarappa) ಆಜಾನ್ ಬಗ್ಗೆ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಯುವಕ ಕಚೇರಿ ಆವರಣದಲ್ಲಿ ನಿಂತು ಆಜಾನ್ ಕೂಗಿದ್ದ. ವಿಡಿಯೋ ವೈರಲ್ ಆಗಿದೆ.

ಆಜಾನ್ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ಅವಹೇಳನ ಮಾಡಿದ ಆರೋಪ ಹಿನ್ನೆಲೆ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದ್ದರು. ಈಶ್ವರಪ್ಪ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹಾಕಿದ್ದರು. ಪ್ರತಿಭಟನೆ ವೇಳೆ ಮುಸ್ಲಿಂ ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಮೇಲೆ ಹತ್ತಿ ಆಜಾನ್ ಕೂಗಿದ . ಎರಡು ದಿನಗಳ ಹಿಂದೆ ನಡೆದಿದ್ದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ಯುವಕ ಆಜಾನ್ ಕೂಗುತ್ತಿದ್ದಂತೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು ಈ ವೇಳೆ ಪೊಲೀಸರು ಹಾಗು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಜಿಲ್ಲಾಧಿಕಾರಿ ಕಚೇರಿ ಮೇಲೆ ಆಜಾನ್ ಕೂಗದಂತೆ ಪೊಲೀಸರು ತಾಕೀತು ಮಾಡಿದ್ದರು. ಆಜಾನ್ ಬಗ್ಗೆ ಮಾತನಾಡುವುದಕ್ಕೆ ಈಶ್ವರಪ್ಪ ಯಾರು? ಇವತ್ತು ಇಲ್ಲಿ ಕೂಗಿದ್ದೇವೆ ನಾಳೆ ವಿಧಾನಸೌಧದಲ್ಲಿ ಕೂಗುತ್ತೇವೆ. ಇದು ತಾಯಿ ಬಗ್ಗೆ ಮಾತನಾಡಿದ್ದಲ್ಲ,ಅಲ್ಲಾಹನ ಬಗ್ಗೆ ಮಾತನಾಡಿದ್ದು ಎಂದು ಮತ್ತೋರ್ವ ಯುವಕ ಆಕ್ರೋಶ ಹೊರ ಹಾಕಿದ್ದ. ಬಳಿಕ ಮುಸ್ಲಿಂ ಮುಖಂಡರೆ ಮುಂದೆ ಬಂದು ಜನರಿಗೆ ಬುದ್ದಿ ಹೇಳಿ ಯುವಕನಿಗೆ ಬೈದು ಪರಿಸ್ಥಿತಿ ನಿಯಂತ್ರಿಸಿದ್ದರು. ನಂತರ ಪ್ರತಿಭಟನಾಕಾರರನ್ನು ಪೊಲೀಸರು ಸ್ಥಳದಿಂದ ವಾಪಸ್ ಕಳುಹಿಸಿದ್ದರು. ಎರಡು ದಿನಗಳ ಹಿಂದೆ ನಡೆದ ಘಟನೆ ಈಗ ವೈರಲ್ ಆಗುತ್ತಿದೆ.