

ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ (BJP MLA Umanath Kotian) ಅವರು ಸ್ವಪಕ್ಷದ ವಿರುದ್ಧವೇ ಕಿಡಿಕಾರಿದ್ದು, ಇದರ ವಿಡಿಯೋವನ್ನು ವೈರಲ್ (Video Viral) ಮಾಡಲಾಗಿದೆ. ಬಿಜೆಪಿಗೆ ಮುಸ್ಲಿಮರು ಮತ ಹಾಕಲ್ಲವೆಂದು ಪಕ್ಷದವರು ಹೇಳುತ್ತಾರೆ, ನಾವು ಯಾಕೆ ಮುಸ್ಲಿಮರ ಕೆಲಸ ಮಾಡಬೇಕು ಅಂತಾ ಹೇಳುತ್ತಾರೆ. ನಮ್ಮ ಬಿಜೆಪಿಯವರಿಗೆ ಅಹಂಕಾರ. ಆದರೆ ನಾನು ಹಾಗಲ್ಲ, ಈ ಎರಡಕ್ಕೂ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಕಿನ್ನಿಗೋಳಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಸದ್ಯ ಬಿಜೆಪಿ (BJP) ವಲಯದಲ್ಲೇ ಕೋಟ್ಯಾನ್ ಹೇಳಿಕೆ ಆಕ್ಷೇಪಕ್ಕೆ ಕಾರಣವಾಗಿದ್ದು, ಮುಸ್ಲಿಮರ ಓಲೈಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ನಿಂದ ವಿಡಿಯೋ ವೈರಲ್ ಮಾಡಲಾಗಿದೆ.

ಈ ಮಾತನ್ನು ಬೇರೆ ಯಾರೂ ಹೇಳುವುದಲ್ಲ, ಉಮನಾಥ ಕೋಟ್ಯಾನ್ ಹೇಳುತ್ತಿರುವು. ಏಕೆಂದರೆ ನಾನು ನೇರವಾಗಿ ಮಾತನಾಡುವವ ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕೇಳಿಸಬಹುದಾಗಿದೆ. ಬಿಜೆಪಿ ಶಾಸಕರ ಈ ಹೇಳಿಕೆ ಬಿಜೆಪಿ ವಲಯದಲ್ಲಿ ಮಾತ್ರವಲ್ಲದೆ, ಹಿಂದೂಪರ ಸಂಘಟನೆಗಳ ಕಣ್ಣುಗಳನ್ನು ಕೆಂಪಗಾಗಿಸಿದೆ. ಹಿಂದುತ್ವದ ಹೆಸರಿನಲ್ಲಿ ಮತಕ್ಕಾಗಿ ನಾಟಕ ಮಾಡುತ್ತಿದ್ದಾರೆ. ನಿಮ್ಮಂತ ರಾಜಕಾರಣಿಗಳು ಹಿಂದೂ ಧರ್ಮಕ್ಕೆ ಕಳಂಕ ಎಂದು ಬರೆದು ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
