

ಮಂಗಳೂರು ಮಾರ್ಚ್05: ರಕ್ತ ಕೊಟ್ಟು ಬಾಂಧವ್ಯ ಕಟ್ಟು ಎಂಬ ಘೋಷಣೆಯೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವಿವಿಧ ಮೆಡಿಕಲ್ ಕಾಲೇಜು ಹಾಗೂ ಬ್ಲಡ್ ಬ್ಯಾಂಕ್ ಗಳ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ನಡೆಸುತ್ತಿರುವ ರಕ್ತದಾನ ಮಾಸಾಚರಣೆಯ ಎರಡನೇ ಬಾನುವಾರವಾದ ಇಂದು ಜಿಲ್ಲೆಯ ಸುರತ್ಕಲ್, ಕಾನ ಪಾಣೆಮಂಗಳೂರು, ಬೊಳಿಯಾರ್ ಸೇರಿದಂತೆ ಆರು ಕಡೆಗಳಲ್ಲಿ ಯಶಸ್ವಿ ರಕ್ತದಾನ ಶಿಬಿರವು ನಡೆಯಿತು , ಬೆಳಿಗ್ಗೆ ಒಂಬತ್ತು ಗಂಟೆಗೆ ಆರಂಭವಾದ ಶಿಬಿರವು ಮಧ್ಯಾಹ್ನ ವರೆಗೂ ಮುಂದುವರೆದಿದೆ . ಒಟ್ಟು 530 ಯುನಿಟ್ ರಕ್ತ ಇಂದು ಸಂಗ್ರಹ ಆಗಿದೆ , ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಿಬಿರಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯ ಬ್ಲಡ್ ಬ್ಯಾಂಕುಗಳಲ್ಲಿ ರಕ್ತದ ಕೊರತೆಯನ್ನು ಸಂಪೂರ್ಣ ನೀಗಿಸಲು ಪಕ್ಷವು ತೀರ್ಮಾನ ಕೈಗೊಃಡಿದೆ ಎಂದು ಅಭಿಯಾನದ ಸಂಯೋಜಕರು ಮತ್ತು ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





