

ಮುಂಬರುವ ಉಳ್ಳಾಲ ವಿಧಾನಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿ ಆಗಲಿದೆ
ಅನ್ವರ್ ಸಾದಾತ್ ಬಜತ್ತೂರು
ಮಂಗಳೂರು ಮಾರ್ಚ್ 01: ಉಳ್ಳಾಲ ವಿಧಾನಸಭಾ ಕ್ಷೇತ್ರದ ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್‌ಡಿಪಿಐ ಬೆಂಬಲಿತ ಏಳು ಅಭ್ಯರ್ಥಿಗಳು ಜಯಗಳಿಸಿದ್ದು,ಇದು ವಂಶಪಾರಂಪರ್ಯ ಮತ್ತು ಸರ್ವಾಧಿಕಾರಿ ಆಡಳಿತದಿಂದ ಬೇಸತ್ತ ಮತದಾರರು ನೀಡಿದ ಸ್ಪಷ್ಟ ಜನಾದೇಶವಾಗಿದೆ. ಸ್ವಾಭಿಮಾನದ ಮತ್ತು ಪರ್ಯಾಯ ರಾಜಕೀಯ ಶಕ್ತಿಯಾದ SDPI ಪಕ್ಷಕ್ಕೆ ಪುದು ಗ್ರಾಮದ ಜನರು ಮನ್ನಣೆ ನೀಡುವುದರೊಂದಿಗೆ ಈ ಗೆಲುವು ಜನತೆಯ ಗೆಲುವಾಗಿದೆ ಎಂದು ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಒಂದು ಸೀಟ್ ಮಾತ್ರ ಇದ್ದ ಈ ಪಂಚಾಯತ್ ನಲ್ಲಿ ಈ ಬಾರಿ ಏಳು ಅಭ್ಯರ್ಥಿಗಳು ವಿಜಯಿಯಾದರಗ ಹದಿನಾಲ್ಕು ಅಭ್ಯರ್ಥಿಗಳು ಕಡಿಮೆ ಮತಗಳ ಅಂತರದಿಂದ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಫಲಿತಾಂಶವು SDPI ಪಕ್ಷದ ಮೇಲೆ ಜನಸಾಮಾನ್ಯರು ಹೊಂದಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಕಳೆದ ಕೆಲವು ಸಮಯಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರು SDPI ಪಕ್ಷದ ಮೇಲೆ ನಿರಾದಾರ ಆರೋಪಗಳನ್ನು ಮಾಡಿ ಪಕ್ಷದ ನಾಯಕರ ಮೇಲೆ ರಾಜಕೀಯ ಪ್ರೇರಿತ ದೂರುಗಳನ್ನು ದಾಖಲಿಸಿ ,ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕಛೇರಿ ,ಪಕ್ಷದ ವತಿಯಿಂದ ನಡೆಸಲ್ಪಡುವ ಸಾರ್ವಜನಿಕ ಸೇವಾ ಮತ್ತು ಮಾಹಿತಿ ಕೇಂದ್ರ ಸೇರಿದಂತೆ ಹಲವಾರು ಕಛೇರಿಗಳ ಮೇಲೆ ದಾಳಿ ಮಾಡಿ ಅಕ್ರಮವಾಗಿ ಬೀಗ ಜಡಿದು,ಸೀಲುಹಾಕಿ ಪಕ್ಷವನ್ನು ಇಲ್ಲವಾಗಿಸಲು ಹತಾಶ ಪ್ರಯತ್ನ ಮಾಡಿದ ಫ್ಯಾಸಿಸ್ಟ್ ಮತ್ತು ಸೋಕಾಲ್ಡ್ ಜಾತ್ಯಾತೀತರಿಗೆ ಇಂದಿನ ಪುದು ಗ್ರಾಮದ ಮತದಾರರು ಸಂವಿಧಾನಾತ್ಮಕವಾಗಿ ಸರಿಯಾದ ಸಂದೇಶವನ್ನು ರವಾನಿಸಿದ್ದಾರೆ.

ಮುಂಬರುವ ಉಳ್ಳಾಲ ಸೇರಿದಂತೆ ಜಿಲ್ಲೆಯಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿ ಆಗಲಿದೆ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ವಂಶಪಾರಂಪರ್ಯ , ಸರ್ವಾಧಿಕಾರಿ ಮತ್ತು ಭ್ರಷ್ಟಾಚಾರದ ಆಡಳಿತದಿಂದ ಭ್ರಮನಿರಸನಗೊಂಡ ಜನಸಾಮಾನ್ಯರು SDPI ಪಕ್ಷದ ಮೇಲೆ ಆತೀವ ಭರವಸೆ ಹೊಂದಿದ್ದಾರೆ . ಇದರಿಂದ SDPI ಪಕ್ಷದ ಮತ್ತು ನಮ್ಮ ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿ ಹೆಚ್ಚಾಗಿದೆ, ಮುಂದಿನ ದಿನಗಳಲ್ಲಿ ನಮ್ಮ ಪಕ್ಷದಿಂದ ಆಯ್ಕೆಯಾದ ಸದಸ್ಯರು ಉತ್ತಮ ಆಡಳಿತವನ್ನು ನೀಡುವ ಮೂಲಕ ಪಾರದರ್ಶಕ ಆಡಳಿತವನ್ನು ಜನತೆಗೆ ಪರಿಚಯಿಸಲಿದ್ದಾರೆ. ಅದೇ ರೀತಿ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಷ್ಪಕ್ಷಪಾತವಾಗಿ ದುಡಿದ ಕಾರ್ಯಕರ್ತರಿಗೆ ಮತ್ತು ನಮ್ಮನ್ನು ಬೆಂಬಲಿಸಿದ ಮತದಾರ ಬಾಂದವರಿಗೆ ಜಿಲ್ಲಾ ಸಮಿತಿಯ ಪರವಾಗಿ ಅನ್ವರ್ ಸಾದತ್ ಬಜತ್ತೂರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
