

ಬೆಂಗಳೂರು: ಸಿಲಿಕಾನ್ ಸಿಟಿ, ಟೆಕ್ ಸಿಟಿ, ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಒಂದು ಮನೆ ಹುಡುಕುವುದು ತಮಾಷೆಯ ವಿಷಯವಲ್ಲ. ಅದರಲ್ಲೂ ಕೋಟ್ಯಾನು ಕೋಟಿ ಜನರ ಕನಸಿನ ನಗರಿಯಲ್ಲಿ ಸಿಂಗಲ್ ಬೆಡ್ ರೂಂಗೂ ಬಾಯಿ ತೆರೆಯುವಷ್ಟು ಕಾಸ್ಟ್ಲಿ. ಇಲ್ಲಿ ನಮಗೆ ಇಷ್ಟು ಆಗುವ ಮನೆ ಬೇಕು ಅಂದ್ರೆ ದುಪ್ಪಟ್ಟು ಹಣ ನೀಡಬೇಕು. ಅದರಲ್ಲೂ ಓನರ್ಗಳ ಒಂದಷ್ಟು ರೂಲ್ಸ್ಗೆ ಓಕೆ ಅನ್ನಬೇಕು. ಸದ್ಯ ಬೆಂಗಳೂರಿನ ಇಂದಿರಾನಗರದಲ್ಲಿ ಬಾಡಿಗೆ ಮನೆ ಪಡೆಯಲು ಮನೆಗೆ ಠೇವಣಿ ನೀಡುವ ಬಗ್ಗೆ ವ್ಯಕ್ತಿಯೊಬ್ಬರ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಅನೇಕರು ಕಮೆಂಟ್ ಮಾಡುತ್ತಿದ್ದಾರೆ.

ಇಂದಿರಾನಗರದಲ್ಲಿ ಬಾಡಿಗೆ ಮನೆಗೆ ಸೆಕ್ಯೂರಿಟಿ ಡೆಪಾಸಿಟ್ ಇಡಲು ಹಣ ಬೇಕಿದೆ. ಹೀಗಾಗಿ ನನ್ನ ಎಡ ಕಿಡ್ನಿ ಮಾರಾಟಕ್ಕಿದೆ… ಇದು ತಮಾಷೆಗಾಗಿ, ಆದ್ರೆ ನನಗೆ ಇಂದಿರಾನಗರದಲ್ಲಿ ಮನೆ ಬೇಕಿದೆ. ನನ್ನ ಪ್ರೊಫೈಲ್ಗಾಗಿ ಇಲ್ಲಿ ಸ್ಕ್ಯಾನ್ ಮಾಡಿ ಎಂದು ಕ್ಯೂಆರ್ ಕೋಡ್ ಹಾಕಿರುವ ಪೋಸ್ಟರನ್ನು ಮರಕ್ಕೆ ಅಂಟಿಸಲಾಗಿದೆ. ಸದ್ಯ ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅನೇಕರು ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ಹಾಗೂ ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇದು ತಮಾಷೆಯ ಪೋಸ್ಟ್ ಆಗಿದ್ದರೂ ಜನಸಾಮಾನ್ಯರ ಗೋಳಾಗಿದೆ. ಇದಕ್ಕೆ ರಮ್ಯಖ್ ಎಂಬ ಹೆಸರಿನ ಟ್ವಿಟರ್ ಬಳಕೆದಾರ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ.

ಟೆಕ್ ಕ್ಯಾಪಿಟಲ್ ಬೆಂಗಳೂರಿನಲ್ಲಿ ಮನೆಗಳ ಹೆಚ್ಚಿನ ಬಾಡಿಗೆ ಮತ್ತು ಠೇವಣಿಗಳ ಬಗ್ಗೆ ಜನರು ಪ್ರತಿಕ್ರಿಯಿಸುವುದರೊಂದಿಗೆ ತಮ್ಮ ಅನುಭವವನ್ನೂ ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟರ್ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಡಿಗೆ ಮತ್ತು ಠೇವಣಿಗಳ ಕುರಿತು ಚರ್ಚೆಗೆ ವೇದಿಕೆಯಾಗಿದೆ.
ಅನಿತಾ ರಾಣೆ ಎಂಬ ಬಳಕೆದಾರರು, ಬೆಂಗಳೂರು ದೇಶ ಮತ್ತು ಪ್ರಪಂಚದ ಹಲವು ಭಾಗಗಳ ಜನರಿಗೆ ನೆಲೆಯಾಗಿದೆ. ಮಾರ್ಕೆಟಿಂಗ್ ತಂತ್ರಗಳನ್ನು ಆಶ್ರಯಿಸಬೇಕಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ಅಭಿತೋಷ್ ಎಂಬ ಬಳಕೆದಾರರು, ತಾವು ಮನೆ ಹುಡುಕುವಾಗ ಮಾಲೀಕರಿಗೆ ನಿನ್ನನ್ನು ಶ್ರೀಮಂತನನ್ನಾಗಿ ಮಾಡುವ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದೆ ಎಂದು ಕಮೆಂಟ್ ಮಾಡಿದ್ದಾರೆ.