

ಮಡಿಕೇರಿ: ಕಾಂಗ್ರೆಸಿಗರ (Congress) ಕಿವಿ ಮೇಲೆ ಹೂ ಅಭಿಯಾನವನ್ನು ಟೀಕಿಸುವ ಭರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಭಾರತವನ್ನು ಭಿಕ್ಷುಕ ರಾಷ್ಟ್ರ ಎಂದು ಹೇಳಿದ್ದಾರೆ.
ಮಡಿಕೇರಿಯ ವಿರಾಜಪೇಟೆಯಲ್ಲಿ ಕೊಡವ ಭಾಷಿಕರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಚೆನ್ನಾಗಿ ಆಡಳಿತ ಮಾಡಿದ್ದರೆ ಭಾರತ ಭಿಕ್ಷುಕರ, ಸಾಲಗಾರರ ರಾಷ್ಟ್ರ ಆಗುತ್ತಿರಲಿಲ್ಲ. ಇಡೀ ದೇಶದ ಜನತೆಯ ಕಿವಿಗೆ ಹೂ ಇಟ್ಟು ಬದುಕಿದ ಕಾಂಗ್ರೆಸ್, ಸ್ವಾತಂತ್ರ್ಯ ನಂತರವೂ ಅದನ್ನೇ ಮಾಡಿದೆ. ಬಿಜೆಪಿಯ ಒಳ್ಳೆ ಕೆಲಸ ಸಹಿಸಲಾಗದೆ ಕಾಂಗ್ರೆಸ್‍ನವರು ಹೂ ಇಟ್ಟುಕೊಂಡಿದ್ದರು, ಮುಂದೆ ಹೂ ಇಟ್ಟುಕೊಂಡೇ ಬದುಕಬೇಕು ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸಿಗರು ಶಾಶ್ವತವಾಗಿ ಹೂ ಇಟ್ಟುಕೊಳ್ಳುವ ಕೆಲಸ ಮಾಡಬೇಕು. ಇಷ್ಟು ದಿನ ಮಂದಿ ತಲೆಯಲ್ಲಿ ಹೂ ಇಟ್ಟಿದ್ದರು. ಸಿದ್ದರಾಮಯ್ಯ ಮಾತು ತಪ್ಪಿದ ಮಗ ಅಂತಲೂ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ, ಮೈಸೂರಿನಲ್ಲಿ ಬಿಜೆಪಿಯೆ ಭರವಸೆ ಎಂಬ ಪೋಸ್ಟರ್ ಮೇಲೆ ಕಾಂಗ್ರೆಸಿಗರು `ಕಿವಿ ಮೇಲೆ ಹೂ’ ಪೋಸ್ಟರ್ ಅಂಟಿಸಿದ್ದಾರೆ. ಇನ್ನು, ಡಿಕೆಶಿ ಪ್ರತಿಕ್ರಿಯಿಸಿ, ಜನರ ಕಿವಿಗೆ ಹೂ ಇಡ್ತಿದ್ದಾರೆ ಅಂತ ಅಂತ ನಾವು ಪ್ರಶ್ನೆ ಕೇಳಿದ್ರೆ, ಅವರು ಉತ್ತರ ಕೊಟ್ಟಿಲ್ಲ. ಯಡಿಯೂರಪ್ಪ ನನ್ನ ಕಿವಿಯಿಂದ ಹೂ ತೆಗೆದ್ರು ಅಂತ ಡಿಕೆಶಿ ನಕ್ಕಿದ್ದಾರೆ.
