

ವಿಶ್ವದ ಅತಿ ದೊಡ್ಡ ಆನ್ಲೈನ್ ವಿಡಿಯೋ ಪ್ಲಾಟ್ಫಾರ್ಮ್ ಎನಿಸಿಕೊಂಡಿರುವ ಯೂಟ್ಯೂಬ್(YouTube)ನ ನೂತನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ(ceo)ಯಾಗಿ ಭಾರತ ಮೂಲದ ನೀಲ್ ಮೋಹನ್ ನೇಮಕಗೊಂಡಿದ್ದಾರೆ. ಯೂಟ್ಯೂಬ್ನ ಮುಖ್ಯ ಉತ್ಪನ್ನ ಅಧಿಕಾರಿ ನೀಲ್ ಮೋಹನ್ ಅವರು ಯೂಟ್ಯೂಬ್ನ ಹೊಸ ಮುಖ್ಯಸ್ಥರಾಗಲಿದ್ದಾರೆ ಎಂದು Wojcicki ಹೇಳಿದ್ದಾರೆ.

ಕಳೆದ 25 ವರ್ಷಗಳಿಂದ ಯುಟ್ಯೂಬ್ಗೆ ಸಿಇಒ ಆಗಿದ್ದ ಸುಸಾನ್ ಆ ಸ್ಥಾನದಿಂದ ಕೆಳಗಿಳಿದಿದ್ದು, ಈಗ ನೂತನ ಸಿಇಒ ಆಗಿ ಭಾರತ ಮೂಲಕ ಅಮೆರಿಕದ ನಿವಾಸಿ ನೀಲ್ ಮೋಹನ್ ಆಯ್ಕೆಯಾಗಿದ್ದಾರೆ. 54 ವರ್ಷದ Wojcicki ಅವರು ಕುಟುಂಬ, ಆರೋಗ್ಯ ಮತ್ತು ವೈಯಕ್ತಿಕ ಯೋಜನೆಗಳ ಬಗ್ಗೆ ನಾನು ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದ್ದಾರೆ. ಈ ಹಿಂದೆ ಗೂಗಲ್ನಲ್ಲಿ ಜಾಹೀರಾತು ಉತ್ಪನ್ನಗಳಿಗೆ ಹಿರಿಯ ಉಪಾಧ್ಯಕ್ಷರಾಗಿದ್ದ ವೊಜ್ಸಿಕಿ, 2014 ರಲ್ಲಿ ಯೂಟ್ಯೂಬ್ನ ಸಿಇಒ ಆಗಿ ನೇಮಕಗೊಂಡರು.

ಅವರು Google ನ ಆರಂಭಿಕ ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರು ಮತ್ತು ಸುಮಾರು 25 ವರ್ಷಗಳಿಂದ ಪೋಷಕ ಕಂಪನಿ Alphabet Inc ಜೊತೆಗೆ ಇದ್ದಾರೆ. ನೀಲ್ ಮೋಹನ್ ಅವರು 2015ರಿಂದ ಕಂಪನಿಯ ಮುಖ್ಯ ಪ್ರಾಡಕ್ಟ್ ಅಧಿಕಾರಿಯಾಗಿದ್ದರು, 2008ರಲ್ಲಿ ಅವರು ಗೂಗಲ್ಗೆ ಸೇರಿದ್ದರು.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಅಡೋಬ್ ಸಿಇಒ ಶಾಂತನು ನಾರಾಯಣ್ ಮತ್ತು ಐಬಿಎಂ ಸಿಇಒ ಅರವಿಂದ್ ಕೃಷ್ಣ ಸೇರಿದಂತೆ ವಿಶ್ವದ ಅನೇಕ ದೊಡ್ಡ ತಂತ್ರಜ್ಞಾನ ಕಂಪನಿಗಳನ್ನು ಪ್ರಸ್ತುತ ಭಾರತೀಯ ಮೂಲದವರೇ ನಡೆಸುತ್ತಿದ್ದಾರೆ. ನೀಲ್ ಮೋಹನ್ ಅವರು ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕ್ ಎಂಜಿನಿಯರಿಂಗ್ನಲ್ಲಿ ಪದವೀಧರರಾಗಿದ್ದಾರೆ. ಅವರು ಮೈಕ್ರೋಸಾಫ್ಟ್ನಲ್ಲಿ ಕೂಡ ಕೆಲಸ ಮಾಡಿದ್ದರು.
