

ಉಡುಪಿ: ಸಂಗಡಿಗರು ತನ್ನ ಗೆಳೆಯನ ಶವವನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ಘಟನೆ ನಡೆದಿದೆ. ಮಾನವೀಯತೆಯನ್ನೇ ಮರೆತು ಹಣ್ಣಿನ ವ್ಯಾಪಾರಿಗಳು ಹೇಗೆ ವರ್ತಿಸಿದ್ದಾರೆ ಎಂದು ಜನ ದೂರಿದ್ದಾರೆ.
ಮಲ್ಪೆ ಪೊಲೀಸ್ ಠಾಣಾ (Malpe Police Station Limit) ವ್ಯಾಪ್ತಿಯ ಕೆಮ್ಮಣ್ಣು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಮಾನವೀಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿಯಲ್ಲಿ ಕಲ್ಲಂಗಡಿ ಮಾರುವ ವ್ಯಾಪಾರಿಗಳು ತಮ್ಮ ಸಂಗಡಿಗರೊಂದಿಗೆ ಟೆಂಪೋದಲ್ಲಿ ತೆರಳುತ್ತಿದ್ದಾಗ 45 ವರ್ಷದ ಕಾರ್ಮಿಕ ಹನುಮಂತ ಮಾರ್ಗ ಮಧ್ಯೆಯೇ ಅನಾರೋಗ್ಯದಿಂದ ಮೃತಪಟ್ಟಿರುವ ಸಾಧ್ಯತೆಯಿದೆ.

ಸಾವನ್ನಪ್ಪಿದಕ್ಕೆ ದಾರಿ ಮಧ್ಯೆಯೇ ಮೃತದೇಹ ಬಿಟ್ಟು ವ್ಯಾಪಾರಿಗಳು ಹೋಗಿದ್ದಾರೆ. ಹನುಮಂತ ವಿಪರೀತವಾಗಿ ಕುಡಿದಿದ್ದ ಹಾಗಾಗಿ ಆತನನ್ನು ವಾಹನದಲ್ಲಿ ಕರೆದುಕೊಂಡು ಹೋಗದೆ ರಸ್ತೆ ಬದಿಯಲ್ಲಿ ಮಲಗಿಸಿದೆವು ಎಂದು ಜೊತೆಗಿದ್ದವರು ಪೊಲೀಸರ ಬಳಿ ಹೇಳಿದ್ದಾರೆ. ಆದರೆ ಇದೊಂದು ಅನುಮಾನಾಸ್ಪದ ಸಾವಾಗಿದ್ದು, ಮಲ್ಪೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.

